Electric Car vs Petrol Car ಯಾವುದನ್ನು ತೆಗೆದುಕೊಂಡರೆ ಬೆಸ್ಟ್?
ನಮಸ್ಕಾರ ಸ್ನೇಹಿತರೆ, ನೀವು ಹೊಸ ಕಾರು ಖರೀದಿಸುವ ಪ್ಲಾನ್‌ನಲ್ಲಿದ್ದೀರಾ? ಹಾಗಾದ್ರೆ ನಿಮ್ಮ ತಲೆಯಲ್ಲಿ ಓಡುತ್ತಿರುವ ಮೊದಲ ಪ್ರಶ್ನೆಯೇ ಇದು “ಎಲೆಕ್ಟ್ರಿಕ್ ಕಾರು (EV) ತಗೋಬೇಕಾ ಅಥವಾ ಪೆಟ್ರೋಲ್ ಕಾರೇ ವಾಸಿನಾ?” ಅನ್ನೋದು ಅಲ್ವಾ?
ನೋಡಿ, ನನ್ನ ಪ್ರಕಾರ ನಿಮಗೆ ಹೇಳುವುದಾದರೆ ಪ್ರತಿಯೊಬ್ಬರಿಗೂ ಇಲೆಕ್ಟ್ರಿಕ್ ಕಾರು ಸೆಟ್ ಆಗಲ್ಲ, ಹಾಗೆಯೇ ಎಲ್ಲರಿಗೂ ಪೆಟ್ರೋಲ್ ಕಾರು ಲಾಭದಾಯಕವೂ ಅಲ್ಲ. ನಮ್ಮ ಕರ್ನಾಟಕದ ರಸ್ತೆಗಳು, ಟ್ರಾಫಿಕ್ ಮತ್ತು ಒಬ್ಬ ಸಾಮಾನ್ಯ ಮಧ್ಯಮ ವರ್ಗದ ವ್ಯಕ್ತಿಯ ಜೇಬಿನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಈ ಪೋಸ್ಟ್ ಅಲ್ಲಿ ನಿಮಗೆ ಪ್ರತಿಯೊಂದು ಮಾಹಿತಿ ತಿಳಿಸಿದ್ದೇನೆ.
ಯಾವುದೇ ಕಂಪನಿಯ ಪರವಾಗಿ ಮಾತನಾಡದೆ, ಒಬ್ಬ ಅಣ್ಣ ಅಥವಾ ಗೆಳೆಯನಾಗಿ ನಿಮಗೆ ಯಾವುದು ಬೆಸ್ಟ್ ಎಂದು ಇಲ್ಲಿ ಬಿಡಿಸಿ ಹೇಳುತ್ತೇನೆ.
ಎಲೆಕ್ಟ್ರಿಕ್ ಕಾರು vs ಪೆಟ್ರೋಲ್ ಕಾರು 2026ರಲ್ಲಿ ನಿಮ್ಮ ಹಣಕ್ಕೆ ಯಾವುದು ಯೋಗ್ಯ? (Which is Best)
ಇವತ್ತು ಪೆಟ್ರೋಲ್ ಬೆಲೆ ನೂರರ ಗಡಿ ದಾಟಿ ಎಲ್ಲೋ ಹೋಗಿದೆ. ಇತ್ತ ಇಲೆಕ್ಟ್ರಿಕ್ ಕಾರುಗಳ ಹಾವಳಿ ಶುರುವಾಗಿದೆ. ಆದರೆ ಕಾರು ಅಂದ್ರೆ ಬರೀ ಶೋಕಿ ಅಲ್ಲ, ಅದು ನಮ್ಮ ದುಡಿಮೆಯ ದೊಡ್ಡ ಹೂಡಿಕೆ. ಹಾಗಾಗಿ ನಿರ್ಧಾರ ಮಾಡುವ ಮುನ್ನ ಈ ಕೆಳಗಿನ ಅಂಶಗಳನ್ನು ಸರಿಯಾಗಿ ಗಮನಿಸಿ.
1. ಮೊದಲು ಹಣದ ಲೆಕ್ಕಾಚಾರ ಮಾಡೋಣ (Cost Comparison)
ಯಾವುದೇ ಕಾರು ಖರೀದಿಸುವಾಗ ನಾವು ಮೊದಲು ನೋಡೋದು ಅದರ ಬೆಲೆ. ಪೆಟ್ರೋಲ್ ಕಾರಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಕಾರುಗಳ ಬೆಲೆ ಸುಮಾರು 3 ರಿಂದ 5 ಲಕ್ಷ ರೂಪಾಯಿ ಜಾಸ್ತಿ ಇರುತ್ತದೆ.
* ಪೆಟ್ರೋಲ್ ಕಾರು: ಆರಂಭಿಕ ಬೆಲೆ ಕಡಿಮೆ. ಈಗ ಒಂದು ಸಾಧಾರಣ ಹ್ಯಾಚ್‌ಬ್ಯಾಕ್ ಅಥವಾ SUV ತೆಗೆದುಕೊಳ್ಳುವುದಾದರೆ 8-12 ಲಕ್ಷಕ್ಕೆ ಸಿಗುತ್ತದೆ.
* ಎಲೆಕ್ಟ್ರಿಕ್ ಕಾರು: ಅದೇ ಮಾದರಿಯ EV ಕಾರು ಬೇಕೆಂದರೆ ನೀವು 12-16 ಲಕ್ಷ ಕೊಡಬೇಕಾಗುತ್ತದೆ.
ಇಲ್ಲಿ ಒಂದು ಟ್ವಿಸ್ಟ್ ಇದೆ: ನೀವು ವರ್ಷಕ್ಕೆ ಎಷ್ಟು ಕಿಲೋಮೀಟರ್ ಓಡಿಸುತ್ತೀರಿ ಎಂಬುದು ಮುಖ್ಯ. ನೀವು ದಿನಕ್ಕೆ ಕೇವಲ 10-20 ಕಿಮೀ ಓಡಿಸುವುದಾದರೆ ಪೆಟ್ರೋಲ್ ಕಾರೇ ಸಾಕು. ಆದರೆ ನಿಮ್ಮ ಓಡಾಟ ದಿನಕ್ಕೆ 50 ಕಿಮೀ ಗಿಂತ ಹೆಚ್ಚಿದ್ದರೆ, ಇವತ್ತೇ EV ಕಡೆ ಮುಖ ಮಾಡಿ. ಏಕೆಂದರೆ EV ಕಾರಿನ ‘ರನ್ನಿಂಗ್ ಕಾಸ್ಟ್’ ಕಿಲೋಮೀಟರ್‌ಗೆ ಕೇವಲ ₹1 ರಿಂದ ₹1.50 ಮಾತ್ರ, ಅದೇ ಪೆಟ್ರೋಲ್ ಕಾರಿಗೆ ₹7 ರಿಂದ ₹9 ಆಗುತ್ತದೆ.
2. ಮಧ್ಯಮ ವರ್ಗದವರಿಗೆ ಯಾವ ಕಾರು ಬೆಸ್ಟ್? (for Middle Class)
ಕರ್ನಾಟಕದ ಮಧ್ಯಮ ವರ್ಗದ ಜನರಿಗೆ ಕಾರು ಅಂದ್ರೆ ಅದು ಆಸ್ತಿ ಇದ್ದಂತೆ. ಇಲ್ಲಿ ಎರಡು ಗುಂಪುಗಳಿವೆ:
* ಗ್ರೂಪ್ A (ಪೆಟ್ರೋಲ್ ಬೆಸ್ಟ್): ನಿಮ್ಮಲ್ಲಿ ಪಾರ್ಕಿಂಗ್ ಮಾಡಲು ಜಾಗ ಇಲ್ಲ, ಮನೆಯಲ್ಲಿ ಚಾರ್ಜಿಂಗ್ ಪಾಯಿಂಟ್ ಇಡಕ್ಕೆ ಬರಲ್ಲ, ಅಥವಾ ವರ್ಷಕ್ಕೊಮ್ಮೆ ಮಾತ್ರ ಲಾಂಗ್ ಟ್ರಿಪ್ ಹೋಗ್ತೀರಿ ಅಂದ್ರೆ ಕಣ್ಣು ಮುಚ್ಚಿ ಪೆಟ್ರೋಲ್ ಕಾರು ತಗೊಳ್ಳಿ.
* ಗ್ರೂಪ್ B (EV ಬೆಸ್ಟ್): ಬೆಂಗಳೂರು, ಮೈಸೂರು ಅಥವಾ ಮಂಗಳೂರಿನಂತಹ ನಗರಗಳಲ್ಲಿ ಆಫೀಸ್‌ಗೆ ದಿನಾ ಓಡಾಡಬೇಕು, ಮನೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ ಅಂದ್ರೆ EV ನಿಮಗೆ ವರದಾನ. ತಿಂಗಳ ಪೆಟ್ರೋಲ್ ಬಿಲ್ ಉಳಿಸಿ ಆ ಹಣದಲ್ಲಿ ಸುಲಭವಾಗಿ EMI ಕಟ್ಟಬಹುದು.
3. ಎಲೆಕ್ಟ್ರಿಕ್ ಕಾರು ಬ್ಯಾಟರಿ ಬಾಳಿಕೆ ಎಷ್ಟು ವರ್ಷ? (The Battery Value of Ev)
ಹಲವರು ಕೇಳುವ ಕಾಮನ್ ಪ್ರಶ್ನೆ ಇದು – “ಮೊಬೈಲ್ ಬ್ಯಾಟರಿ ತರಾನೇ ಇದು 2 ವರ್ಷಕ್ಕೆ ಹಾಳಾಗುತ್ತಾ?”
ಖಂಡಿತ ಇಲ್ಲ. ಈಗಿನ ಕಾಲದ LFP (Lithium Iron Phosphate) ಬ್ಯಾಟರಿಗಳು ತುಂಬಾ ಸ್ಟ್ರಾಂಗ್ ಆಗಿವೆ.
* ಬಹುತೇಕ ಕಂಪನಿಗಳು (Tata, MG, Hyundai) ಬ್ಯಾಟರಿ ಮೇಲೆ 8 ವರ್ಷ ಅಥವಾ 1.6 ಲಕ್ಷ ಕಿಮೀ ವಾರಂಟಿ ನೀಡುತ್ತಿವೆ.
* ಸಾಮಾನ್ಯವಾಗಿ ಒಂದು EV ಬ್ಯಾಟರಿ 10 ರಿಂದ 12 ವರ್ಷ ಆರಾಮಾಗಿ ಬಾಳಿಕೆ ಬರುತ್ತದೆ.
* ಎಚ್ಚರಿಕೆ: ಬ್ಯಾಟರಿ ಹಾಳಾದರೆ ಅದನ್ನು ಬದಲಾಯಿಸಲು 4 ರಿಂದ 7 ಲಕ್ಷ ರೂಪಾಯಿ ಬೇಕಾಗಬಹುದು. ಆದರೆ ವಾರಂಟಿ ಇರುವುದರಿಂದ 8 ವರ್ಷದವರೆಗೆ ನಿಮಗೆ ಆ ಭಯ ಬೇಡ.
![]()
4. ಮೈಲೇಜ್ ಮತ್ತು ರೇಂಜ್ ವ್ಯತ್ಯಾಸ (Mileage vs Range)
ಪೆಟ್ರೋಲ್ ಕಾರಿನಲ್ಲಿ ನಾವು ‘ಮೈಲೇಜ್’ ನೋಡ್ತೀವಿ, EV ಯಲ್ಲಿ ‘ರೇಂಜ್’ ನೋಡ್ತೀವಿ.
* ಪೆಟ್ರೋಲ್ ಕಾರು: ಒಂದು ಫುಲ್ ಟ್ಯಾಂಕ್ ಹಾಕಿಸಿದರೆ 500-600 ಕಿಮೀ ಹೋಗಬಹುದು. ಪೆಟ್ರೋಲ್ ಬಂಕ್ ಎಲ್ಲೆಂದರಲ್ಲಿ ಸಿಗುತ್ತವೆ.
* EV ಕಾರು: ಕಂಪನಿಗಳು 400 ಕಿಮೀ ರೇಂಜ್ ಅಂತ ಹೇಳಿದ್ರೆ, ನಿಜವಾದ ರಸ್ತೆಯಲ್ಲಿ ಅದು 250-300 ಕಿಮೀ ಕೊಡಬಹುದು. ಎಸಿ ಹಾಕಿದ್ರೆ, ಘಾಟ್ ಸೆಕ್ಷನ್‌ನಲ್ಲಿ ಓಡಿಸಿದ್ರೆ ರೇಂಜ್ ಇನ್ನೂ ಕಡಿಮೆಯಾಗುತ್ತದೆ.
Ev ಇದ್ದವರಿಗೆ ಟಿಪ್: ಲಾಂಗ್ ಟ್ರಿಪ್ ಹೋಗುವಾಗ ಚಾರ್ಜಿಂಗ್ ಸ್ಟೇಷನ್ ಎಲ್ಲಿದೆ ಎಂದು ಮುಂಚಿತವಾಗಿ ಪ್ಲಾನ್ ಮಾಡಬೇಕಾಗುತ್ತದೆ. ಚಾರ್ಜ್ ಖಾಲಿಯಾಗುವ ಭಯ ಆರಂಭದಲ್ಲಿ ಕಾಡುವುದು ಸಹಜ.
5. ಸಬ್ಸಿಡಿ ಮತ್ತು ಟ್ಯಾಕ್ಸ್ ಉಳಿತಾಯ (Karnataka EV Subsidy)
ಕರ್ನಾಟಕ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಭರ್ಜರಿ ಸಪೋರ್ಟ್ ನೀಡುತ್ತಿದೆ.
* ರೋಡ್ ಟ್ಯಾಕ್ಸ್ ವಿನಾಯಿತಿ: ₹25 ಲಕ್ಷಕ್ಕಿಂತ ಕಡಿಮೆ ಬೆಲೆಯ EV ಕಾರುಗಳಿಗೆ ಕರ್ನಾಟಕದಲ್ಲಿ ರೋಡ್ ಟ್ಯಾಕ್ಸ್‌ನಲ್ಲಿ ರಿಯಾಯಿತಿ ಇದೆ (ನಿಯಮಗಳು ಆಗಾಗ ಬದಲಾಗುತ್ತವೆ, ಖರೀದಿಸುವ ಮುನ್ನ ಶೋರೂಂನಲ್ಲಿ ಚೆಕ್ ಮಾಡಿ).
* ರಿಜಿಸ್ಟ್ರೇಷನ್ ಫೀ: ಪೆಟ್ರೋಲ್ ಕಾರಿಗೆ ಹೋಲಿಸಿದರೆ EV ನೋಂದಣಿ ಶುಲ್ಕ ತುಂಬಾ ಕಡಿಮೆ.
* Income Tax Benefit: ನೀವು ಲೋನ್ ಮೇಲೆ EV ಕಾರು ಖರೀದಿಸಿದರೆ, ಸೆಕ್ಷನ್ 80EEB ಅಡಿಯಲ್ಲಿ ₹1.5 ಲಕ್ಷದವರೆಗೆ ಬಡ್ಡಿ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು (ಇದು ಕೇವಲ ವೈಯಕ್ತಿಕ ಬಳಕೆಗೆ ಮಾತ್ರ).
ಕರ್ನಾಟಕ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿ ತಿಳಿದುಕೊಳ್ಳಿ: Official Govt Site
6. ಐದು ವರ್ಷದ ನಂತರ ರೀಸೇಲ್ ವ್ಯಾಲ್ಯೂ ಹೇಗಿರುತ್ತೆ? (Resale Value of Ev)
ಇಲ್ಲಿ ಪೆಟ್ರೋಲ್ ಕಾರು ಮೇಲುಗೈ ಸಾಧಿಸುತ್ತದೆ.
* ಪೆಟ್ರೋಲ್ ಕಾರು: 5 ವರ್ಷದ ನಂತರವೂ ಶೇ. 50-60 ರಷ್ಟು ಬೆಲೆಗೆ ಮಾರಾಟವಾಗುತ್ತದೆ. ಮಾರುತಿ ಅಥವಾ ಟೊಯೋಟಾ ಕಾರುಗಳಾದರೆ ಡಿಮ್ಯಾಂಡ್ ಇನ್ನೂ ಹೆಚ್ಚು.
* ಎಲೆಕ್ಟ್ರಿಕ್ ಕಾರು: ಇದರ ಮರುಮಾರಾಟ ಬೆಲೆ ಇನ್ನು ಅಸ್ಪಷ್ಟವಾಗಿದೆ. ಬ್ಯಾಟರಿ ಟೆಕ್ನಾಲಜಿ ವೇಗವಾಗಿ ಬದಲಾಗುತ್ತಿರುವುದರಿಂದ, ಹಳೆಯ EV ಕಾರುಗಳನ್ನು ಕೊಳ್ಳಲು ಜನ ಸ್ವಲ್ಪ ಹಿಂಜರಿಯುತ್ತಾರೆ. ಆದರೆ ಪೆಟ್ರೋಲ್ ಬೆಲೆ ಹೀಗೆಯೇ ಏರುತ್ತಿದ್ದರೆ ಮುಂದಿನ ದಿನಗಳಲ್ಲಿ EV ರೀಸೇಲ್ ವ್ಯಾಲ್ಯೂ ಕೂಡ ಹೆಚ್ಚಾಗಬಹುದು.
ಇದನ್ನು ಓದಿ: ಹೋಂಡಾ ಆಕ್ಟಿವಾ ಇಲೆಕ್ಟ್ರಿಕ್ ಮತ್ತು ಕ್ಯೂಸಿ 1 ಬಿಡುಗಡೆ: ಒಂದು ಬಾರಿ ಚಾರ್ಜ್ ಮಾಡಿದರೆ 102 Km ಓಡುತ್ತೆ
7. ಮೇಂಟೆನೆನ್ಸ್: ಯಾವುದರಲ್ಲಿ ಖರ್ಚು ಕಡಿಮೆ? (Maintenance cost of both)
ಇಲ್ಲಿ EV ರಾಜ!
ಪೆಟ್ರೋಲ್ ಕಾರಿನಲ್ಲಿ ಇಂಜಿನ್ ಆಯಿಲ್, ಫಿಲ್ಟರ್ ಬದಲಾವಣೆ, ಸ್ಪಾರ್ಕ್ ಪ್ಲಗ್, ಬೆಲ್ಟ್ ಹೀಗೆ ನೂರಾರು ಬಿಡಿಭಾಗಗಳಿರುತ್ತವೆ. ಪ್ರತಿ 10,000 ಕಿಮೀಗೆ ಸರ್ವಿಸ್ ಮಾಡಿಸಲೇಬೇಕು.
ಆದರೆ EV ಯಲ್ಲಿ ಇಂಜಿನ್ ಇಲ್ಲ. ಕೇವಲ ಮೋಟಾರ್ ಮತ್ತು ಬ್ಯಾಟರಿ ಇರುತ್ತದೆ.
* ಪೆಟ್ರೋಲ್ ಕಾರ್ ಸರ್ವಿಸ್: ವರ್ಷಕ್ಕೆ ₹10,000 – ₹15,000.
* EV ಕಾರ್ ಸರ್ವಿಸ್: ವರ್ಷಕ್ಕೆ ₹3,000 – ₹5,000 (ಕೇವಲ ಬ್ರೇಕ್ ಪ್ಯಾಡ್, ಟೈರ್ ರೊಟೇಷನ್ ಮತ್ತು ವಾಷಿಂಗ್).
ಯಾವ ಕಾರು ಖರೀದಿಸಬೇಕು? ನನ್ನ ನೇರ ಅಭಿಪ್ರಾಯ (My Personal Suggestions)
ನೀವು ಪೆಟ್ರೋಲ್ ಕಾರನ್ನೇ ಖರೀದಿಸಿ, ಒಂದು ವೇಳೆ:
* ನಿಮ್ಮ ತಿಂಗಳ ಓಡಾಟ 800 ಕಿಮೀಗಿಂತ ಕಡಿಮೆ ಇದ್ದರೆ.
* ನೀವು ಹೆಚ್ಚಾಗಿ ಹಳ್ಳಿ ಪ್ರದೇಶ ಅಥವಾ ಚಾರ್ಜಿಂಗ್ ವ್ಯವಸ್ಥೆ ಇಲ್ಲದ ಕಡೆ ಪ್ರಯಾಣ ಮಾಡುವುದಾದರೆ.
* ಕಾರನ್ನು 3-4 ವರ್ಷದಲ್ಲಿ ಮಾರಿ ಹೊಸತು ತೆಗೆದುಕೊಳ್ಳುವ ಪ್ಲಾನ್ ಇದ್ದರೆ.
ನೀವು ಎಲೆಕ್ಟ್ರಿಕ್ ಕಾರನ್ನೇ ಖರೀದಿಸಿ, ಒಂದು ವೇಳೆ:
* ನಿಮ್ಮ ತಿಂಗಳ ಓಡಾಟ 1,500 ಕಿಮೀಗಿಂತ ಹೆಚ್ಚಿದ್ದರೆ.
* ನಿಮ್ಮ ಹತ್ತಿರ ಸ್ವಂತ ಪಾರ್ಕಿಂಗ್ ಮತ್ತು ಚಾರ್ಜಿಂಗ್ ಪಾಯಿಂಟ್ ಇಡುವ ಜಾಗ ಇದ್ದರೆ.
* ನಿಮಗೆ ಸೈಲೆಂಟ್ ಮತ್ತು ಸ್ಮೂತ್ ಡ್ರೈವಿಂಗ್ ಇಷ್ಟವಾಗುವುದಾದರೆ.
* ನೀವು ಕಾರನ್ನು ಕನಿಷ್ಠ 7-8 ವರ್ಷ ಬಳಸುವ ಉದ್ದೇಶ ಹೊಂದಿದ್ದರೆ.
ನೀವು ಫೋನ್ ಕೊಳ್ಳುವ ಪ್ಲಾನ್ ಮಾಡುತ್ತಿದ್ದರೆ ಇದನ್ನು ಓದಿ: 10,001 ಬ್ಯಾಟರಿ ಹೊಂದಿರುವ ಮೊಟ್ಟ ಮೊದಲ ಫೋನ್ ಲಾಂಚ್! ಇಷ್ಟು ಕಡಿಮೆ ಬೆಲೆಗೆ
FAQs ನಿಮ್ಮಲ್ಲಿರುವ ಪ್ರಶ್ನೆಗಳಿಗೆ ನಮ್ಮ ಉತ್ತರ
1. ಮಳೆಗಾಲದಲ್ಲಿ ಎಲೆಕ್ಟ್ರಿಕ್ ಕಾರು ಓಡಿಸುವುದು ಸೇಫ್ ಆಗಿದೆಯೇ?
ಖಂಡಿತ. EV ಬ್ಯಾಟರಿಗಳು ‘IP67’ ರೇಟಿಂಗ್ ಹೊಂದಿರುತ್ತವೆ. ಇದರರ್ಥ ನೀರು ಒಳಗೆ ಹೋಗದಂತೆ ಅವುಗಳನ್ನು ಪೂರ್ತಿ ಸೀಲ್ ಮಾಡಲಾಗಿರುತ್ತದೆ. ಮಳೆ ಅಥವಾ ವಾಟರ್ ವಾಶ್‌ನಿಂದ ಯಾವುದೇ ತೊಂದರೆ ಇಲ್ಲ.
2. ಮನೆಯಲ್ಲಿ ಚಾರ್ಜ್ ಮಾಡಲು ಎಷ್ಟು ಸಮಯ ಬೇಕು?
ಸಾಮಾನ್ಯ 15A ಸಾಕೆಟ್ ಬಳಸಿ ಚಾರ್ಜ್ ಮಾಡಿದರೆ 10 ರಿಂದ 12 ಗಂಟೆ ಬೇಕು. ಆದರೆ ಕಂಪನಿ ನೀಡುವ ‘Fast Home Charger’ ಅಳವಡಿಸಿಕೊಂಡರೆ 6-8 ಗಂಟೆಯಲ್ಲಿ ಫುಲ್ ಆಗುತ್ತದೆ.
3. ಎಲೆಕ್ಟ್ರಿಕ್ ಕಾರಿನ ಇನ್ಶೂರೆನ್ಸ್ ದುಬಾರಿಯೇ?
ಹೌದು, ಪೆಟ್ರೋಲ್ ಕಾರಿಗಿಂತ ಶೇ. 15-20 ರಷ್ಟು ಜಾಸ್ತಿ ಇರುತ್ತದೆ. ಏಕೆಂದರೆ ಬ್ಯಾಟರಿ ಬೆಲೆ ಹೆಚ್ಚಿರುವುದರಿಂದ ಇನ್ಶೂರೆನ್ಸ್ ಪ್ರೀಮಿಯಂ ಸ್ವಲ್ಪ ಜಾಸ್ತಿ ಬೀಳುತ್ತದೆ.
4. ದೀರ್ಘ ಪ್ರಯಾಣಕ್ಕೆ (Long Drive) EV ಸೂಕ್ತವೇ?
ಈಗ ಕರ್ನಾಟಕದ ಬಹುತೇಕ ಹೈವೇಗಳಲ್ಲಿ (ಬೆಂಗಳೂರು-ಮೈಸೂರು, ಬೆಂಗಳೂರು-ಮಂಗಳೂರು) ಚಾರ್ಜಿಂಗ್ ಸ್ಟೇಷನ್ ಸೌಲಭ್ಯವಿದೆ. ಸರಿಯಾಗಿ ಪ್ಲಾನ್ ಮಾಡಿದರೆ ಹೋಗಬಹುದು, ಆದರೆ ಪೆಟ್ರೋಲ್ ಕಾರಿನಷ್ಟು ಫ್ರೀಡಂ ಸಿಗಲ್ಲ.
5. EV ಬ್ಯಾಟರಿ ಕಿತ್ತು ಹೋದರೆ ಏನು ಮಾಡುವುದು?
ಭಯಪಡಬೇಡಿ, ಇಡೀ ಬ್ಯಾಟರಿ ಪ್ಯಾಕ್ ಬದಲಿಸುವ ಅವಶ್ಯಕತೆ ಇರುವುದಿಲ್ಲ. ಕೆಲವೊಮ್ಮೆ ಕೇವಲ ಒಂದು ನಿರ್ದಿಷ್ಟ ‘ಸೆಲ್’ ಹಾಳಾಗಿರುತ್ತದೆ, ಅದನ್ನು ಮಾತ್ರ ರಿಪೇರಿ ಮಾಡಬಹುದು.
ಕೊನೆದಾಗಿ ಹೇಳುವುದಾದರೆ:
ಕಾರು ಖರೀದಿಸುವುದು ಭಾವನಾತ್ಮಕ ನಿರ್ಧಾರ ಮಾತ್ರವಲ್ಲ, ಅದು ಹಣಕಾಸಿನ ನಿರ್ಧಾರವೂ ಹೌದು. ನೀವು ಲಾಂಗ್ ಟರ್ಮ್ ಸೇವಿಂಗ್ಸ್ ನೋಡುತ್ತಿದ್ದರೆ ಎಲೆಕ್ಟ್ರಿಕ್ ಬೆಸ್ಟ್. ಇನ್ವೆಸ್ಟ್‌ಮೆಂಟ್ ಕಡಿಮೆ ಇರಲಿ ಅಂದ್ರೆ ಪೆಟ್ರೋಲ್ ಬೆಸ್ಟ್.
ಈ ಮಾಹಿತಿಯ ಬಗ್ಗೆ ನಿಮಗೆ ಇನ್ನೂ ಗೊಂದಲವಿದೆಯೇ? ನಿಮ್ಮ ತಿಂಗಳ ಓಡಾಟ ಎಷ್ಟು ಅಂತ ಕೆಳಗೆ ಕಾಮೆಂಟ್ ಮಾಡಿ, ನಾನು ನಿಮಗೆ ವೈಯಕ್ತಿಕವಾಗಿ ಯಾವ ಕಾರು ಸೂಕ್ತ ಎಂದು ಸಲಹೆ ನೀಡುತ್ತೇನೆ!
My name is Shreeram Gowda, I’m Kannada blogger and digital content researcher specializing in Indian and Karnataka government schemes, public welfare initiatives, and technology-related information. I carefully analyzes official government websites, circulars, and announcements to provide accurate, up-to-date, and reliable content. With a strong focus on transparency and user benefit, I aims to help readers clearly understand eligibility, application processes, and the latest updates without confusion or misinformation.